ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು

ಮೊದಲ್ ಎಲ್ಲೈತೀ ಕರೊನ ..ಆಮ್ಯಾಲೆ ಇಲ್ಲಿ ಐತೀ ಕರೋನ ಅನ್ಕೋತ್
ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು
ಮನ್ಶಶ್ಯಾ ಮಂಗಳ್ಕ ಹೊಗುವಾಶ್ಟೂ ಬೆಳದರು ಅಂಗಳಕ್ಕ ಕಾಲಿಡ್ಲಾರದಂಗ್ ಅಗಿತ್ತು ಈ ವರ್ಷ
ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು
ಹುಲಿಗೆ ಹೆದರ್ಲಿಲ್ಲ ಸಿಂಹಕ್ಕ ಹೆದ್ರಲಿಲ್ಲಾರ್ ಮಂದಿ ಮೂಗನ್ಯನ ಸಿಂಬ್ಳಕ ಹೆದರಿದ್ರು
ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು
ಅಂಜ್ಕೊತ್ ಅಳ್ಕೊತ್ ಎಳ್ಕೊತ್ ಬಿಳ್ಕೊತ್ ತೊಳ್ಕೋತ ವರಸ್ಕೊತ
ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು
ಜೀವನದಾಗ ಏನ್ ಕಲೀಲಿಕು ಈ ವರ್ಷ ನಾವೆಲ್ಲರೂ ತೊಳಿಯುದ್ ಮತ್ತು ವಾರಸುದ್ ಮಾತ್ರ ಚೆಂತನ್ಯಗ್ ಕಲ್ತವೀ
ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು
ವೈರಾಣು ಸುದ್ದಿ ಕೇಳಿ ಕೇಳಿ ಹೈರಾಣಾಗಿ ನಮಗೂ ಬಂದೈತಿ ಅಂತ ಅಂಜಿ ಸತ್ತವರೇ ಜಾಸ್ತಿ
ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು
ಮನ್ಯಾಗ್ ಕುತ್ತಕೆಲಸ ಮಾಡಕೋತ ಭಾಂಡೆ ತೋಳದ್ ತೋಳದ್ ಮನ್ಯಾಗ್ ಎಷ್ಟ ಗಂಗಾಳ್,
ವಾಠಗಾ ಅಂಡ್ ಚಮಚೆ ಗೊತ್ತಾಗುವು
ಅಂತು ಇಂತು ಮುಗಿತ್ರಲೆ ಇವನೌನ ಇಪ್ಪತ್ತು ಇಪ್ಪತ್ತು
ಗಂಗಾಳ ಭಾರಿಸಿದ್ಯಾ ಚಪ್ಪಾಳೆ ಹೋಡ್ದದ್ಯಾ ಮತ್ತು ದೀಪ ಹಚ್ಚಿದ್ದ್ಯಾ ಅಂದ್ರು ಹೋಗ್ಲಿಲ್ಲಾ ಕರೋನ

Comments